ಕೊಟ್ಟ ಮಾತು ಉಳಿಸಿಕೋಳ್ತಾರಾ ಮಾತು ತಪ್ಪದ ಜನಾರ್ದನ ಪೂಜಾರಿ ?
У вашего броузера проблема в совместимости с HTML5
ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು ಎಂಬ ಮಾತಿದೆ.. ಈ ಮಾತು ಸದ್ಯ ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಯವರಿಗೆ ಸರಿಯಾಗಿ ಅನ್ವಯವಾಗುತ್ತೆ. ಹೌದು, ಲೋಕ ಸಭಾ ಚುನಾವಣಾ ಸಂಧರ್ಭ ಜೋಷ್ ನಲ್ಲಿ ಆಡಿದ ಮಾತು ಇದೀಗ ಪೂಜಾರಿಯವರಿಗೆ ಮುಳುವಾಗೋ ಸಾಧ್ಯತೆ ದಟ್ಟವಾಗಿದೆ. ಮಾರ್ಚ್ 25 ರಂದು ಮಿಥುನ್ ರೈ ನಾಮಪತ್ರ ಸಲ್ಲಿಕೆಗೆ ಮೊದಲು ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಕುದ್ರೋಳಿ ದೇವಾಲಯದ ಹೆಸರು ಮುಂದಿಟ್ಟು ಪೂಜಾರಿ ಮಹಾಪ್ರತಿಜ್ಞೆ ಮಾಡಿದ್ದರು..ಮಿಥುನ್ ಗೆಲ್ಲದಿದ್ದರೆ ಕುದ್ರೋಳಿ ಕ್ಷೇತ್ರ ಮಾತ್ರವಲ್ಲದೆ,ಚರ್ಚ್ ಮಸೀದಿಗಳಿಗೂ ಕಾಲಿಡಲ್ಲ ಅಂತಾ ಹೇಳಿದ್ದರು..