ಕಕ್ಯಬೀಡು ಪಂಚದುರ್ಗಾಪರಮೇಶ್ವರಿ ಬ್ರಹ್ಮಕಲಶೋತ್ಸವ-ಧಾರ್ಮಿಕ ಸಭೆಯಲ್ಲಿ ಗರಂ ಆಗಿ ಮಾತನಾಡಿದ ರಮಾನಾಥ ರೈ
У вашего броузера проблема в совместимости с HTML5
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕು ಕಕ್ಯಬೀಡು ಉಳಿ ಗ್ರಾಮ ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರ ಅಷ್ಟಬಂಧ ಬ್ರಹ್ಮಕಲಶೋತ್ಸವ ವರ್ಷಾವಧಿ ಜಾತ್ರೋತ್ಸವ ಕಾರ್ಯಕ್ರಮಗಳು ಸಡಗರ ಸಂಭ್ರಮದಿಂದ ಜರುಗಿದವು. ಕ್ಷೇತ್ರದ ತಂತ್ರಿ ವರ್ಯರಾದ ಬ್ರಹ್ಮಶ್ರೀ ಬಾಲಕೃಷ್ಣ ಪಾಂಡವರು ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ಕಾರ್ಯಕ್ರಮಗಳು ಪ್ರಧಾನ ಅರ್ಚಕರಾದ ಶ್ರೀನಿವಾಸ ಅರ್ಮುಡ್ ತ್ತಾಯ ವೈದಿಕ ತ್ವದಲ್ಲಿ, ದಾಮೋದರ ನಾಯಕ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಧಾರ್ಮಿಕ ಸಭಾ ಕಾರ್ಯಕ್ರಮಗಳು ಸಾಂಗವಾಗಿ ಜರುಗಿದ ವು. ಕೊನೆಯದಿನ ಬ್ರಹ್ಮಕಲಶದ ಆಶೀರ್ವಚನವನ್ನು ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸಂಪುಟ ನರಸಿಂಹ ಮಠ ಸುಬ್ರಹ್ಮಣ್ಯ ಇವರು ನೆರವೇರಿಸಿದರು. ಧಾರ್ಮಿಕ ಉಪನ್ಯಾಸವನ್ನು ನ್ಯೂಜೆರ್ಸಿಯ ಕೃಷ್ಣ ವೃಂದಾವನ ಪ್ರಧಾನ ಅರ್ಚಕರಾದ ಶ್ರೀ ಯೋಗಿಂದ್ರ ಭಟ್ ಅವರು ನೆರವೇರಿಸಿದರು. ಗೌರವ ಉಪಸ್ಥಿತಿಯಲ್ಲಿ ಮಾಜಿ ಶಾಸಕ ರಾದ ಶ್ರೀ ರಮಾನಾಥ ರೈ ಅವರು ಉಪಸ್ಥಿತರಿದ್ದು ಶುಭಾಶಂಸನೆಗೈದರು.